ನಾನು ಸ್ವ ಇಚ್ಛೆಯಿಂದ ಆಧಾರ್ ಓವಿಡಿ ಕೆವೈಸಿ ಅಥವಾ ಇ-ಕೆವೈಸಿ ಅಥವಾ ಆಫ್ಲೈನ್ ಸರಿ ನೋಡುವಿಕೆಗಾಗಿ ಅಯ್ಕೆ ಮಾಡುತ್ತೇನೆ ಮತ್ತು ಬ್ಯಾಂಕ್ಗೆ ನನ್ನ ಆಧಾರ್ ಸಂಖ್ಯೆ, ವರ್ಚುವಲ್ ಐಡಿ ,ಇ-ಆಧಾರ್, ಎಕ್ಸ್ಎಮ್ಎಲ್, ಮಾಸ್ಕ್ಡ್ ಆಧಾರ್, ಆಧಾರ್ ವಿವರಗಳು, ಡೆಮೊಗ್ರಾಫಿಕ್ ಮಾಹಿತಿ, ಗುರುತಿನ ಮಾಹಿತಿ, ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ, ಮುಖದ ಅಧಿಪ್ರಮಾಣನ ವಿವರಗಳು ಮತ್ತು/ ಅಥವಾ ಬಯೊಮೆಟ್ರಿಕ್ ಮಾಹಿತಿ (ಸಾಮೂಹಿಕವಾಗಿ , ‘‘ಮಾಹಿತಿ’’) ಯನ್ನು ಸಲ್ಲಿಸುತ್ತೇನೆ.
ನನಗೆ ಬ್ಯಾಂಕ್ನಿಂದ ತಿಳಿಸಲಾಗಿದೆ, ಏನೆಂದರೆ:
ಆಧಾರ್ನ ಸಲ್ಲಿಸುವಿಕೆಯು ಕಡ್ಡಾಯವಲ್ಲ ಮತ್ತು ಕೆವೈಸಿ ಮತ್ತು ಗುರುತನ್ನು ಪ್ರಮಾಣೀಕರಿಸಲು ಆಧಾರ್ ಅಲ್ಲದೆ ಅಧಿಕೃತವಾಗಿ ಸಿಂಧುವಾಗಿರುವ ದಸ್ತಾವೇಜುಗಳೊಂದಿಗೆ ಪ್ರತ್ಯಕ್ಷ ಕೆವೈಸಿಯ ವಿಧಾನದಿಂದ ಒಳಗೊಂಡು ಪರ್ಯಾಯ ಆಯ್ಕೆಗಳಿವೆ. ಎಲ್ಲ ಆಯ್ಕೆಗಳನ್ನು ನನಗೆ ನೀಡಲಾಗಿದೆ.
ಇ- ಕೆವೈಸಿ/ ಅಧಿಪ್ರಮಾಣನ /ಆಫ್ಲೈನ್ ಸರಿನೋಡುವಿಕೆಗಾಗಿ ಬ್ಯಾಂಕ್ ಆಧಾರ್ ಸಂಖ್ಯೆ ಮತ್ತು/ಅಥವಾ ಬಯೊಮೆಟ್ರಿಕ್ಸ್ಅನ್ನು ಸಿಐಡಿಆರ್/ಯುಐಡಿಎಐಯೊಂದಿಗೆ ಹಂಚಿಕೊಳ್ಳುತ್ತದೆ ಮತ್ತು ಸಿಐಡಿಆರ್/ಯುಐಡಿಎಐ ಅಧಿಪ್ರಮಾಣನ ಡೇಟಾ, ಆಧಾರ್ ಡೇಟಾ, ಡೆಮೊಗ್ರಾಫಿಕ್ ವಿವರಗಳು , ನೋಂದಾಯಿತ ಮೊಬೈಲ್ ಸಂಖ್ಯೆ, ಗುರುತಿನ ಮಾಹಿತಿಯನ್ನು ಬ್ಯಾಂಕ್ನೊಂದಿಗೆ ಹಂಚಿಕೊಳ್ಳುತ್ತದೆ, ಅವನ್ನು ಕೆಳಗೆ 3 ರಲ್ಲಿ ನಮೂದಿಸಲಾದ ಮಾಹಿತಿಪ್ರಾಪ್ತ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತದೆ.
ನಾನು ಬ್ಯಾಂಕ್ಗೆ (ಮತ್ತು ಅದರ ಇತರ ಸೇವೆ ಒದಗಿಸುವವರಿಗೆ) ಈ ಕೆಳಗಿನ ಮಾಹಿತಿಪ್ರಾಪ್ತ ಉದ್ದೇಶಗಳಿಗಾಗಿ ಅಧಿಕಾರ ನೀಡುತ್ತೇನೆ ಮತ್ತು ನನ್ನ ಸಮ್ಮತಿಯನ್ನು ನೀಡುತ್ತೇನೆ:
ಪಿಎಮ್ಎಲ್ ಅಧಿನಿಯಮ , 2002 ಮತ್ತು ಅದರ ಅಡಿಯಲ್ಲಿ ನಿಯಮಗಳು ಮತ್ತು ಆರ್ಬಿಐ ಮಾರ್ಗದರ್ಶಿ ಸೂಚಿಗಳಿಗೆ ಅನುಗುಣವಾಗಿ ಕೆವೈಸಿ ಮತ್ತು ನಿಯತಕಾಲಿಕ ಕೆವೈಸಿ ಪ್ರಕ್ರಿಯೆ ಅಥವಾಬ್ಯಾಂಕ್ನ ಅಥವಾ ಅದರ ಮೂಲಕದ, ಈಗ ಇರುವ ಅಥವಾ ಭವಿಷ್ಯದ ಎಲ್ಲ ಖಾತೆಗಳು, ಸೌಲಭ್ಯಗಳು, ಸೇವೆಗಳು ಮತ್ತು ಸಂಬಂಧಗಳಿಗಾಗಿ ಅನ್ವಯವಾಗುವ ಕಾನೂನಿಗೆ ಅನುಗುಣವಾಗಿ ನನ್ನ ಗುರುತನ್ನು ಪ್ರಮಾಣೀಕರಿಸಲು, ನನ್ನ ಗುರುತಿಸುವಿಕೆ, ಆಫ್ಲೈನ್ ಸರಿ ನೋಡುವಿಕೆ ಅಥವಾ ಇ- ಕೆವೈಸಿ ಅಥವಾ ಹೌದು/ಅಲ್ಲ ಅಧಿಪ್ರಮಾಣನ , ಡೆಮೊಗ್ರಾಫಿಕ್ ಅಥವಾ ಇತರ ಅಧಿಪ್ರಮಾಣನ/ಸರಿ ನೋಡುವಿಕೆ/ಗುರುತಿಸುವಿಕೆಗಳನ್ನು ಅನುಮತಿಸಲಾಗಬಹುದು.
ಮಾಹಿತಿಯನ್ನು ಸಂಗ್ರಹಿಸುವುದು, ಹಂಚಿಕೊಳ್ಳುವುದು, ಶೇಖರಿಸಿಡುವುದು, ದಾಖಲೆಗಳನ್ನು ಕಾಪಾಡಿಕೊಂಡು ಬರುವುದು ಮತ್ತು ಮಾಹಿತಿಯನ್ನು ಉಪಯೋಗಿಸುವುದು ಮತ್ತು ದಾಖಲೆಗಳ ಅಧಿಪ್ರಮಾಣನ/ಸರಿನೋಡುವಿಕೆ/ಗುರುತಿಸುವಿಕೆ: (ಎ) ಮೇಲಿನ ಮಾಹಿತಿಪ್ರಾಪ್ತ ಉದ್ದೇಶಗಳಿಗಾಗಿ, (ಬಿ) ಹಾಗೂ ನಿಯಾಮಕ ಮತ್ತು ಕಾನೂನು ಸಂಬಂಧಿತ ವರದಿ ಮತ್ತು ಫೈಲಿಂಗ್ಗಳಿಗಾಗಿ ಮತ್ತು/ಅಥವಾ (ಸಿ ) ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಆವಶ್ಯಕವಾಗಿರುವಲ್ಲಿ;
ಆಧಾರ್ ಎನೇಬಲ್ಡ್ ಪೇಮೆಂಟ್ ಸರ್ವೀಸಸ್ ( ಎಇಪಿಎಸ್)ಗಾಗಿ ನನ್ನ ಖಾತೆಯನ್ನು ಸಮರ್ಥಗೊಳಿಸಲು;
ಒಂದು ನ್ಯಾಯಾಲಯ , ಯಾವುದೇ ಪ್ರಾಧಿಕಾರ ಅಥವಾ ಮಧ್ಯಸ್ಥಿಕೆಯನ್ನು ಒಳಗೊಂಡು ಸಾಕ್ಷ್ಯದ ಉದ್ದೇಶಗಳಿಗಾಗಿ ಸಮ್ಮತಿ, ಮಾಹಿತಿ ಅಥವಾ ಅಧಿಪ್ರಮಾಣನ, ಗುರುತಿಸುವಿಕೆ, ಸರಿನೋಡುವಿಕೆ ಇತ್ಯಾದಿಗಳ ದಾಖಲೆಗಳು ಮತ್ತು ಲಾಗ್ಗಳನ್ನು ಹಾಜರುಪಡಿಸಲು.
ಆಧಾರ್ ಸಂಖ್ಯೆ ಮತ್ತು ಮೂಲ ಬಯೊಮೆಟ್ರಿಕ್ಸ್ಅನ್ನು ಕಾನೂನಿಗೆ ಅನುಗುಣವಾಗಿ ಮತ್ತು ಸಿಐಡಿಆರ್ ಸಲ್ಲಿಸುವಿಕೆಗಳಿಗೆ ಹೊರತುಪಡಿಸಿ ಶೇಖರಿಸಿಡಲಾಗುವುದಿಲ್ಲ/ಹಂಚಿಕೊಳ್ಳಲಾಗುವುದಿಲ್ಲ. ನಾನು ಸ್ವತಃ ನನ್ನ ಆದಾರ್ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಓಟಿಪಿಯನ್ನು ಉಪಯೋಗಿಸಿ ಇ-ಆಧಾರ್ಅನ್ನುಡೌನ್ನೋಡ್ ಮಾಡಿದ್ದೇನೆ. ಈ ದಸ್ತಾವೇಜು ಕ್ರಮಬದ್ಧವಾಗಿಲ್ಲ ಎಂದು ಕಂಡು ಬಂದ ಪ್ರಸಂಗದಲ್ಲಿ ಅಥವಾ ನನ್ನಿಂದ ಯಾವುದೇ ತಪ್ಪು ಮಾಹಿತಿ ಒದಗಿಸಲ್ಪಟ್ಟಿರುವ ಪ್ರಸಂಗದಲ್ಲಿ ನಾನು ಬ್ಯಾಂಕ್ಅನ್ನು ಅಥವಾ ಅದರ ಅಧಿಕಾರಿಗಳನ್ನು ಹೊಣೆಯಾಗಿಸುವುದಿಲ್ಲ.
ಮೇಲಿನ ಸಮ್ಮತಿ ಮತ್ತು ಮಾಹಿತಿ ಸಂಗ್ರಹಿಸುವ ಉದ್ದೇಶವನ್ನು ನನಗೆ ನನ್ನ ಸ್ಥಳೀಯ ಭಾಷೆಯಲ್ಲಿ ವಿವರಿಸಲಾಗಿದೆ.